ಸ್ವಾಧೀನತಾ ಪ್ರಕ್ರಿಯೆ ಹಾಗೂ ಕ.ರಾ.ರ.ಸಾ.ನಿ.ದ ಅಂಕಿ ಆಂಶಗಳು

1) ಕ.ರಾ.ರ.ಸಾ.ನಿ.ವು ವಾ.ಕ.ರ.ಸಾ.ಸಂ., ಈ.ಕ.ರ.ಸಾ.ಸಂ. , ಬೆಂ.ಮ.ಸಾ.ಸಂ. ಹಾಗೂ ಕ.ರಾ.ರ.ಸಾ.ನಿ.ಗಳನ್ನು ಒಳಗೊಂಡಂತೆ ಎಲ್ಲ ನಿಗಮಗಳಿಗಾಗಿ ವಿವಿಧ ವಸ್ತುಗಳನ್ನು ಖರೀದಿಸುತ್ತದೆ. ನಿಗಮದ ವಾರ್ಷಿಕ ಅಗತ್ಯಗಳು ಕೆಳಕಂಡಂತಿವೆ:

ಕ್ರ.ಸಂ.

ಸಲಕರಣಾ ಗುಂಪುಗಳ ವರ್ಗೀಕರಣ

ವಾರ್ಷಿಕ ಖರೀದಿ ಮೊತ್ತ ರೂ ಕೋಟಿಗಳಲ್ಲಿ

ಕ.ರಾ.ರ.ಸಾ.ನಿ. ಬೆಂ.ಮ.ಸಾ.ಸಂ. ವಾ.ಕ.ರ.ಸಾ.ಸಂ. ಈ.ಕ.ರ.ಸಾ.ಸಂ ಒಟ್ಟು
1 ಹೆಚ್.ಎಸ್.ಡಿ 647.57 344.43 452.14 283.98 1728.12
2 ಬಿಡಿ ಭಾಗಗಳು 24.06 13.13 17.50 15.31 70.00
3 ಟೈರ್, ಟ್ಯೂಬ್ ಹಾಗೂ ಕವಾಟ 30.17 13.42 19.06 13.60 76.25
4 ಕೀಲೆಣ್ಣೆಗಳು 10.98 5.25 8.41 5.06 29.70
5 ವಿದ್ಯುತ್ಕೋಶ (ಬ್ಯಾಟರಿ) ಮತ್ತು ಇನ್ನಿತರೆ ಭೋಗ್ಯ ಸಾಮಗ್ರಿಗಳು 54.60 36.40 19.50 15.60 126.10
6 ಟೈರ್ ದುರಸ್ತಿ ಸಲಕರಣೆಗಳು 18.33 5.22 13.80 7.70 45.06
7 ಸಮವಸ್ತ್ರ, ಮಾರ್ಗ ಸಾಮಗ್ರಿ ಮತ್ತು ಇತರೆ ಲೇಖನ ಸಾಮಗ್ರಿಗಳು 7.80 5.20 3.90 3.90 20.80
  ಒಟ್ಟು ಮೊತ್ತ 793.51 423.05 534.31 345.15 2096.03

2) ಬಹುತೇಕ ಈ ಎಲ್ಲ ಸಾಮಗ್ರಿಗಳು ದೇಶದ ಸರ್ಕಾರಿ ಮೂಲಗಳಿಂದ, ವಾಹನ ತಯಾರಕರು ಹಾಗೂ ಪ್ರಸಿಧ್ಧ ಸರಬರಾಜುದಾರರಿಂದ ಉತ್ಪಾದಿಸಲ್ಪಟ್ಟಿರುತ್ತವೆ.

ಡೀಸೆಲ್ ಐ.ಓ.ಸಿ. (ಭಾರತ ಸರ್ಕಾರದ ಉದ್ಯಮ)
ಸ್ಟೀಲ್ (ಉಕ್ಕು) ಎಸ್.ಏ.ಐ.ಎಲ್. (ಭಾರತ ಸರ್ಕಾರದ ಉದ್ಯಮ)
ಕೀಲೆಣ್ಣೆಗಳು ಹಿಂದೂಸ್ತಾನ್ ಪೆಟ್ರೋಲಿಯಂ (ಭಾರತ ಸರ್ಕಾರದ ಉದ್ಯಮ) ಐ.ಓ.ಸಿ. (ಭಾರತ ಸರ್ಕಾರದ ಉದ್ಯಮ) ಕ್ಯಾರೋಲ್ ಲ್ಯೂಬ್ರಿಕಂಟ್ಸ್ ( ಸ್ಥಳೀಯ ಉದ್ಯಮ)
ವಾಹನ ಬಿಡಿ ಭಾಗಗಳು ಟಾಟಾ ಮೋಟರ್ಸ್, ಅಶೋಕ್ ಲೆಲ್ಯಾಂಡ್, ಟೆಲ್ಕೋ, ವೋಲ್ವೊ, ಮೈಕೋ-ಬಾಷ್, ಸ್ವರಾಜ್-ಮಜ಼್ದಾ, ಟಿ.ವಿ.ಎಸ್. ಗ್ರೂಪ್ಸ್ ಮತ್ತು ಇತರೆ
ಸಮವಸ್ತ್ರ ಕರ್ನಾಟಕ ರಾಜ್ಯ ಕೈಮಗ್ಗ ನಿಗಮ
ಕಾಗದ ಮೈಸೂರು ಪೇಪರ್ ಮಿಲ್ಸ್ ನಿಗಮಿತ
ಬಣ್ಣಗಳು ಮೈಸೂರು ಪೈಂಟ್ಸ್ & ವಾರ್ನಿಷ್

ಎಲ್ಲವೂ ಕರ್ನಾಟಕ ರಾಜ್ಯ ಸರ್ಕಾರದ ಅಧಿನಿಯಮಿತ

  • ಎಲ್ಲ ಖರೀದಿಗಳು ವಿ-ಪ್ರಾಪ್ತಿ ವ್ಯವಸ್ಥೆಯ ಮೂಲಕ.
  • ಎಲ್ಲ ಟೆಂಡರುಗಳ ನಿರ್ವಹಣೆ ಕರ್ನಾಟಕ ಸರ್ಕಾರದ www.eproc.karnataka.gov.in ಅಂತರ್ಜಾಲ ತಾಣದ ಈ-ಆಡಳಿತದ ಈ-ಪ್ರಾಪ್ತಿ ಪುಟದ ಮೂಲಕ.
  • ಎಲ್ಲ ಖರೀದಿಗಳು ಕೆ.ಟಿ.ಪಿ.ಪಿ. ಕಾಯಿದೆಯನ್ವಯ.
  • ಕರ್ನಾಟಕ ಸರ್ಕಾರದ ಹೊಸ ಔದ್ಯಮಿಕ ನೀತಿಯ ಮೇರೆಗೆ, ನಿಗಮವು ತನ್ನೆಲ್ಲ ಖರೀದಿಗಳಿಗೆ ಕರ್ನಾಟಕದ ಲಘು ಉದ್ಯಮಗಳಿಗೆ ಪ್ರಮುಖ ಪ್ರಾಶಸ್ತ್ಯವನ್ನು ಕೊಡುತ್ತದೆ.
  • ಕರ್ನಾಟಕದ ಲಘು ಉದ್ಯಮಗಳಿಂದ, ಬಿಡಿ ಭಾಗಗಳು ಹಾಗೂ ಇನ್ನಿತರ ಭೋಗ್ಯ ಸಾಮಗ್ರಿಗಳಿಗಾಗಿ ನಿಗಮದ ಸರಾಸರಿ ವಾರ್ಷಿಕ ಖರೀದಿ ವೆಚ್ಚ ₨ 52.00 ಕೋಟಿಗಳು.

ತ್ಯಾಜ್ಯ ವಸ್ತುಗಳ ವಿಲೇವಾರಿ:

  • ನಿರುಪಯುಕ್ತ ಬಸ್ ಗಳು, ಟೈರ್ ಗಳು, ರಬ್ಬರ್ ತ್ಯಾಜ್ಯ, ಉಕ್ಕು, ಅಲ್ಯೂಮಿನಿಯಂ ಇತ್ಯಾದಿಗಳ ವಿಲೇವಾರಿ ಸಾರ್ವಜನಿಕ ಟೆಂಡರ್ ಮತ್ತು ಹರಾಜುಗಳ ಮೂಲಕ.
  • Tಪ್ರತಿ ತಿಂಗಳು ಬೆಂಗಳೂರು, ಹುಬ್ಬಳ್ಳಿ, ಗುಲಬರ್ಗದಲ್ಲಿ ಸಾರ್ವಜನಿಕ ಟೆಂಡರ್ ಹಾಗೂ ಹರಾಜನ್ನು ಆಯೋಜಿಸಲಾಗುತ್ತದೆ. ನಿಗಮವು ತ್ಯಾಜ್ಯ ವಸ್ತುಗಳ ಮಾರಾಟದ ಮೂಲಕ ಅಂದಾಜು ₨ 20 ಕೋಟಿ ಆದಾಯ ಗಳಿಸಿದೆ.
  • ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗುವಂತೆ, ನಿಗಮವು ಸುಸ್ಥಿತಿಯಲ್ಲಿರುವ ಬಸ್ಸುಗಳನ್ನು ಶೈಕ್ಷಣಿಕ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತದೆ.
  • ಸಂಪೂರ್ಣ ಖರೀದಿ ಚಟುವಟಿಕೆಗಳು ಗಣಕೀಕೃತಗೊಂಡಿವೆ. ನಿಗಮವು ಏ.ಎಸ್.ಆರ್.ಟಿ.ಯು ಹಾಗೂ ಡಿ.ಜಿ.ಎಸ್& ಡಿ ದರದ ಒಪ್ಪಂದಗಳನ್ನೂ ನಿರ್ವಹಿಸುತ್ತದೆ.

Last updated date 01-11-2019 03:15 AM
Custom Search
Sort by:
Relevance
Relevance
Date